ಹಾವೇರಿ: ಮರಕ್ಕೆ ಕಾರು ಡಿಕ್ಕಿ, ನಾಲ್ವರು ಯುವಕರು ಸಾವು; ಮೂವರಿಗೆ ಗಾಯ ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ. ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ.ಬೇವಿನಹಳ್ಳಿಯ ಏಳು ಯುವಕರು ಶನಿವಾರ ಬೆಳಗ್ಗೆ ತಮ್ಮೂರಿನಿಂದ ಕೆಲಸ ನಿಮಿತ್ತ ಬೆಳಗಾವಿ‌ ಜಿಲ್ಲೆಯ ಖಾನಾಪುರ ಸಮೀಪದ ನಂದಗಡ‌ಕ್ಕೆ ಹೊರಟಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರ ತಪ್ಪಿ ಹನುಮರಹಳ್ಳಿಯ ಬಳಿ‌ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ, ಕಾರು ಉರುಳಿ ರಸ್ತೆ ಪಕ್ಕದ ‌ತಗ್ಗಿನಲ್ಲಿ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.ಭೀಕರ ಅಪಘಾತದಲ್ಲಿ ನೀಲಪ್ಪ ಮತ್ತು ಸಂದೀಪ್ ಸ್ಥಳದಲ್ಲೇ ಮೃತಪಟ್ಟರೆ, ಶಿವನಗೌಡ ಮತ್ತು ಕಲ್ಮೇಶ್ ಶಿಗ್ಗಾಂವ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಸಂಬಂಧ ಶಿಗ್ಗಾಂವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.